Best Prema Kavanagalu 2021 | Romantic Love Kavana

Hello friends welcome to this new article You want to tell your loved one how much you love them, we have a collection of love poetry for you.

 In this article we are going to give you best prema kavanagalu, Romantic love kavana, Kannada Kavanagalu About Love 
Table Of Contents(toc)


Love Kavanagalu

Love Kavanagalu


❤️ಯಾರು ನಿಮಗಾಗಿ ಕಾಯ್ತಾರೋ ಅವರಿಗಾಗಿ ಬದುಕಿ,ಯಾರು ನಿಮಗಾಗಿ ಅಳುತ್ತಾರೋ ಅವರನ್ನು ನಗಿಸಿ,ಯಾರು ನಿಮಗಾಗಿ ಪ್ರತಿಕ್ಷಣ ಹಂಬಲಿಸುತ್ತಾರೆ ಅವರನ್ನು ಪ್ರೀತಿಸಿ.❤️
❤️ಓ ನನ್ನ ಗೆಳತಿ ಆಗು ನನ್ನ ಸಂಗಾತಿ.
ಓ ನನ್ನ ಗೆಳತಿ ಆಗು ನನ್ನ ಸಂಗಾತಿ.
ಆಗದಿದ್ದರೆ ನನ್ನ ಸಂಗಾತಿ, ನಾ ಆಗುವೆ,
ಮುಂಗಾರು ಮಳೆಯಾ ಗಣೇಶನ ರೀತಿ..❤️❤️ಕಳೆದು ಹೋದವರನ್ನು ಹುಡುಕಬಹುದು.ಆದರೆ ಬದಲಾದವರನ್ನು ಹುಡುಕುವುದು ಕಷ್ಟ.❤️❤️ಪ್ರೀತಿಯಲ್ಲಿ ಚಿಗುರಿತು ನನ್ನ ಕನಸು,
ಆಸೆಯಲ್ಲಿ ಅರಳಿತು ನನ್ನ ಮನಸು..
ನನ್ನ ಮನಸು ನನಸಾಗಿದೆ, ನಾ ಕಂಡ ಕನಸು..
ಬಾಡದಿರಲಿ ಹೂವಿನಂತ ಮನಸು, ಎಂದಿಗೂ ನೀ ನನ್ನ ಪ್ರೀತಿಸು…❤️❤️ಬಿಡಿಸಲಾಗದ ಪ್ರೀತಿ ನಮ್ಮದು..
ದೂರಾಗದ ಪ್ರೇಮ
ನಮ್ಮದು.❤️❤️ಪೂರೈಸುವೆ ಎಂದಿಗೂ ನಾನು,
ಮನವ ಅರಿತು ನಿನ್ನ ಇಷ್ಟ..
ಸಹಿಸುವೆ ನಿನ್ನ ಸಲುವಾಗಿ,
ಬದುಕಿನ ಹಲವು ಕಷ್ಟ…
ನಮ್ಮಿಬ್ಬರ ಪ್ರೀತಿಯ ನಂಟಲ್ಲಿ ಎಂದೂ ಇಲ್ಲ ನಷ್ಟ…❤️


Love Kavanagalu Kannada Photos
❤️ಅವಳೆಂದರೆ ನನ್ನ ಮನದಲ್ಲಿ ಕಾಲಿಟ್ಟ ಮಂದಾಕಿನಿಯು, ಮದರಂಗಿಯಲ್ಲಿ ನನ್ನ ಹೆಸರು ಬರೆದುಕೊಂಡ ವಧುವು.❤️
❤️ಕವಿತೆಯೆ ತುಂಬುವವು ಕಂಡೊಡನೆ ನಿನ್ನ…. ಹೇಳಲು ಧೈರ್ಯ ಬೇಕು ನನಗಿನ್ನ..❤️


❤️ನಿನ್ನ ಮೊಗದಲ್ಲಿ ಯಾವಾಗಲೂ

ನಗು ತುಂಬಿರಲಿ,

ಆ ನಗುವಿಗೆ ಯಾವಾಗಲೂ

ನಾ ಕಾರಣವಾಗಿರಲಿ.❤️


❤️ ಕರೆದು ಬಿಡಲೇ ನಿನ್ನ ಹೆಸರನ್ನೊಮ್ಮೆ

ಇಳಿದು ಬಿಡಲೇ ನಿನ್ನ ಹೃದಯಕೊಮ್ಮೆ,

ಈ ಪ್ರೀತಿಯ ಒಲವೆಲ್ಲವು ನಿನಗೆ ತಾನೇ… ❤️


❤️ಮನಸ್ಸಿಗೆ ನೋವಾದ್ರೆ ಮನಸ್ಸಿನಲ್ಲಿ ಇರುವವರಿಗೆ ಹೇಳಬಹುದು ಮನಸಿನಲ್ಲಿ ಇರುವವರು ನೋವು ಮಾಡಿದ್ರೆ ಯಾರಿಗೆ ಹೇಳಬೇಕು..❤️


❤️ಗಬೇಕು ನಾ

ಅವಳ ನಗುವಿನ ನೆನಪು…

ಆಗಬೇಕು ನಾ

ಅವಳ ಕೋಪದ ಕಂಪು…

ಆಗಬೇಕು ಅವಳಿಗೆ ನಾ

ಎಲ್ಲದಕ್ಕೂ ನಾನೇ ಕಾರಣ…

ಅವಳಿಗಾಗಿಯೇ ನನ್ನ ಬಾಳ ಪ್ರೇರಣಾ..❤️


❤️ಹೊತ್ತು ಮುಳುಗುವ ಹೊತ್ತು, ಇಬ್ಬನಿ ಜಾರುತಲಿತ್ತು

ಇನಿಯ ನಾ ಕಾದೆ ನಿನಗಾಗಿ, ಈ ಲೋಕವ ಮರೆತು

ಗಂಟೆಗಳು ಉರುಳುತಿವೆ, ರವಿಯ ಕಿರಣ ಸರಿಯುತಿದೆ,

ಬಾ ನನ್ನ ನಲ್ಲ ಎಲ್ಲಿರುವೆ ನೀ ……………

ಓ ಮುದ್ದು ಮನಸೇ……….❤️


❤️ಕಂಡೆ ನಾ ಕನಸಲಿ ನಿನ್ನ…

ಆದೇ ನೀ ನನ್ನ ಹೃದಯದ ಬಡಿತ ಇನ್ನ…

ಪ್ರೀತಿಸುತ್ತಿರುವೆ ನಾ ನಿನ್ನ..

ಎಂದೆಂದಿಗೂ ನೀನೇ ನನ್ನ ಬಾಳಿಗೆ ಚೆನ್ನ…❤️


Love Kavanagalu❤️ಗೊತ್ತೋ ..

ಗೊತ್ತಿಲ್ಲದೇನೋ ಈ ಹೃದಯ ನಿನ್ನ ತುಂಬಾ ಪ್ರೀತಿ ಮಾಡಿ ಬಿಟ್ಟಿದೆ.❤️


Best Prema Kavanagalu❤️ನಿನ್ನೆಯ ನೆನಪುಗಳ . . .

ನಾಳೆಯ ಕನಸುಗಳ . . .

ನಡುವಿನ ಈ ಉಸಿರಿಗಿರುವ ,

ಹೆಸರ ನೆನಪಿಸಿಕೋ ಮತ್ತೊಮ್ಮೆ . .

ಮರೆಯಲಾಗದೆ ..❤️


❤️ಕನಸುಗಳೆಲ್ಲ ಕಮರಿದೆ ಈ ಕ್ಷಣ

ನೀನಿಲ್ಲದೆ ತಲ್ಲಣಿಸುತಿದೆ ಈ ಮನ❤️


❤️ಪ್ರತಿ ಸರಿ ನಾ ನಿನ್ನ ಪಕ್ಕ ಕೂತಾಗಲು

ನನಗಾಗುವ ನಡುಕಕ್ಕೆ ಕಾರಣವೇ ತಿಳಿದಿಲ್ಲ ಹುಡುಗಿ❤️


❤️ಅವಳೆಂದರೆ ನನ್ನ ಬಾಳಿನ ಬಂಗಾರ,

ಅವಳ ಮಾತು ಮಧುರ,

ನನ್ನ ಜೀವನದ ಮಂದಾರ…❤️


❤️ಅವಳೆಂದರೆ ಅವನ

ಜೀವನದ ಜೀವವಾಗಿರುವಳು❤️


❤️ಇರು ನೀ ನನ್ನೀ ಹೃದಯಕ್ಕಾಗಿ..

ಇರುತ್ತೆ ನನ್ನೀ ಮಿಡಿತ ನಿನಗಾಗಿ..

ಇರುವೆ ನೀ ಪ್ರತಿ ಜನ್ಮದಲ್ಲೂ

ನನ್ನ ಪ್ರೀತಿಯ ರಾಯಭಾರಿಯಾಗಿ..❤️


Kannada Love Feeling Kavanagalu


❤️ಅವಳು ನನ್ನ ನೋಡಿ ನಾಚಿದ್ದು ಒಂದು ಕಡೆಯಾದರೆ

ನಾಚಿಕೆಯೆ ನಾಚುವಂತ ಅವಳ ಬಿನ್ನಾಣಕ್ಕೆ ನಾ ಸೋತಿದ್ದೆ.❤️


❤️ಏಯ್ . . .

ಹುಡುಗಿ ಸುಮ್ಮಸುಮ್ಮನೆ ನಿನ್ನ Heroine ಅಂತ ಒಪ್ಪೊಕೊಂಡಿಲ್ಲ,

ನೀ ನನ್ನ Lifetime Crush ಕಣೇ …❤️


❤️ಪ್ರೀತಿ ಇಲ್ಲ ಎನ್ನುವುದಾದರೆ ……

ನಾವಿಬ್ಬರು ನಡೆಯುವಾಗ ಒಂದೇ ನೆರಳು ಬೀಳುವುದೇಕೆ ….

ಆ ಒಂದೇ ನೆರಳಿನಲ್ಲಿ ನಾವಿಬ್ಬರು ಕಾಣುವುದೇಕೆ …!!❤️


Love Kavana❤️ ಹೃದಯವೆಂಬ “Hardware” ನಲ್ಲಿ ಮನಸೆಂಬ “Operating System” ಹರಿದಾದುತಿದೆ,

ಪ್ರೀತಿ ಎಂಬ “Software” install ಮಾಡಿದ್ದೆ ….

ಕೆಲವರು ಹೇಳ್ತಾರೆ “Happiness” ಅನ್ನೋ “Functionality” ಇದೆ ಅಂತ ,

ಇನ್ನು ಕೆಲವರು ಹೇಳ್ತಾರೆ ಇದರಲ್ಲಿ ಮೋಸಾ ಅನ್ನೋ “Bug” ಇದೆ ಅಂತ … ❤️


Kannada Love Feeling Kavanagalu


❤️ನೀ ಬರೆದ ಕವಿತೆಯಲ್ಲಿ

ಮರೆತು ಹೋದ ಪದವೊಂದು ನಾನು

ನಾ ಬರೆಯಲಾಗದೆ ಹೋದ ಕವಿತೆಯಲ್ಲಿ

ಮರೆಯಲಾಗದ ಸಾಲುಗಳು ನೀನು❤️


❤️ಎನಗೆ ಕೊನೆಯಾಸೆಯೊಂದಿದೆ ಕೇಳು ಗೆಳತಿ,

ಹೋದರೆ ಪ್ರಾಣ ನಿನ್ನ ಜೊತೆಯೆ ಹೋಗಲಿ ನಂದು,

ಬದುಕಿದರೆ ಜೀವ ನಿನ್ನ ಜೊತೆಯೆ ಬಾಳಬೇಕೆಂದು,

ದೂರವಾಗುವ ಪ್ರೀತಿಯಲ್ಲ ನಮ್ಮಿಬ್ಬರದ್ದು,

ಜೊತೆಯಾಗಿಯೇ ಇರುವೆವು ನಾವಿಬ್ಬರೂ ಒಂದೇ ಎಂದು… ❤️


❤️ನಿನ್ನ ಕೋಮಲವಾದ ವದನದಲ್ಲಿ,

ಕಾಡುತಿರುವ ಕಂಗಳಲಿ,

ಕಿರುನಗುವ ಅಂದ ಅದರದಲಿ,

ನಾನಿರುವೆ ನಿನ್ನಲ್ಲಿ, ಬಳ್ಳಿ ಅಪ್ಪಿದ ಮರದಲಿ,

ಬಿಳಿ ಹೂಗಳ ಕಂಪಲಿ …❤️


❤️ನಡು ರಾತ್ರಿಯಲ್ಲಿ ಕಾಡುವವು

ನಿನ್ನ ಮಾತಿನ ವೈಖರಿ..

ನಿನ್ನ ಹಚ್ಚಿಕೊಂಡಿರುವ ಹೃದಯದಲ್ಲಿ

ನಿನ್ನದೇ ಕಾರ್ಯಕಾರಿ..❤️


❤️ಕದ್ದು ಮುಚ್ಚಿ ಪ್ರೀತಿ ಕೊಡುವೆ ಗೆಳತಿ ನೀ . . 

ನನಗೆ ತಿಳಿಯದೆ ಸಂಗ್ರಹಿಸಲು ಸಾಲದಾಗಿದೆ

ಹೃದಯವೆ ಒಲವಾಗಿ ಸೇರಿಬಿಡು ನೀನನ್ನೆದೆ❤️


❤️ನಿನ್ನ ಕಂಡಾಗ ಆಗುವ ಸಂತೋಷ..

ಹೂವಿನ ಹಾಗೆ ಅರಳುವುದು

ನನ್ನ ಹೃದಯದ ಕೋಶ..❤️


❤️ತೋರುವೆ ನಿನಗೆ ಪ್ರೀತಿ…

ಸ್ವಾರ್ಥವಿಲ್ಲದ ರೀತಿ…

ಸ್ವೀಕರಿಸು ನೀ ನನ್ನ ಪ್ರೀತಿ

ಆನಂದಿಸುವೇನು ಎಂದೂ

ನೀನೇ ನನ್ನ ಭಾಳ ಪ್ರತೀತಿ..❤️


❤️ಸಾವಿರ ಭಾವಗಳ ಹೇಳಿರುವೆ ನಿನ್ನ ಮುಂದೆ…

ನೀನು ನನ್ನವಳೆ ಇನ್ನು ಮುಂದೆ…❤️


❤️ಅವಳು ನನ್ನ ಪ್ರೇಮದರಮನೆಯ ಮಹಾರಾಣಿಯು,

ನನ್ನ ಮನದಲ್ಲಿ ಮನೆ ಮಾಡಿದ

ಚಂದ್ರಚಕೋರಿಯು..❤️


❤️ಮಾತಾಡುವ ಮುತ್ತು ಅವಳು ನನ್ನವಳು,

ಮುತ್ತಿನಂತಯೇ ಮಾತು

ಉದುರಿಸುವಳು.❤️


❤️ಪ್ರೀತಿಯೇ ನೀನಾಗಿರುವೆ ನನಗೆ

ಪ್ರೇಮವೂ ನೀನಾಗಿರುವೆ ನನಗೆ

ಜೀವವೆ ನೀನಾಗಿರುವೆ ನನಗೆ

ಜೀವನವೂ ನೀನಾಗಿರುವೆ ನನಗೆ

ಪ್ರತಿ ಜನುಮದಲ್ಲೂ ಬೇಕು ನೀ ನನಗೆ

ಇರದಿದ್ದರೆ ನೀ, ಇರುವುದೆ ಇಲ್ಲ ನನ್ನ ನಗೆ.❤️


❤️ಬದುಕಿಕೋ ಎಂದು ಸಂತೆಯೊಳಗೆ ನೀ

ಬೆರಳು ಸೋಕಿಸಿ ಹೋದಾಗಿನಿಂದ

ಮತಿಭ್ರಮಣೆಯಾಗಿದೆ ಹುಡುಗೀ..

ಬದುಕುವುದೇನಿದ್ದರೂ ನಿನ್ನೊಂದಿಗೆ

ಸಹಿಸಿಕೋ ಈ ಅರೆಹುಚ್ಚನನ್ನು.❤️


❤️ಮನಸಲ್ಲಿರೋದನ್ನ ಮನಸಲ್ಲೇ ಬಿಡೋಕೆ ಮನಸಿಲ್ಲ,

ಕನಸಲ್ಲಿ ಬರೋದನ್ನ ಬರಿ ಕನಸಾಗಿಸೋಕೆ ಮನಸೊಪ್ಪುತ್ತಿಲ್ಲ,

ಮನಸು ಕನಸಿನ ನಡುವೆ ಏನಾಗುವೆನೋ ಗೊತ್ತಿಲ್ಲ..❤️


❤️ಹೇಳುವೆ ನೀ ನೂರಾರು ಮಾತು…

ಕೊಡುವೆ ನಾ ಮಾತಿಗೊಂದು ಮುತ್ತು..❤️


❤️ಸುಖವಿರಲಿ ದುಖ:ವಿರಲಿ,

ಕನಸಿರಲಿ ನನಸಿರಲಿ…

ಜೀವನದ ಪ್ರತಿಯೊಂದು ಕ್ಷಣದಲ್ಲೂ ಮನದಲ್ಲಿನ ಪ್ರತಿಯೊಂದು ಕಣದಲ್ಲೂ…

ಕಾಯುತ್ತಿರುವೆ ನಿನ್ನ ಆ ಒಂದು ಮೊಗವನ್ನ…❤️


❤️ಬೇಡದ ಆಲೋಚನೆಗಳ ದೂರ ಮಾಡಿ

ಬೇಸತ್ತ ಭಾವನೆಗಳಿಗೆ ಮರುಜೀವ ನೀಡಿ ಮರೆಯಾಗಿ ನಿಂತೆ

ಯಾರೆ ನೀ . . ?❤️


Love Kavanagalu 2021❤️ಅಡಕಸಬಿ ಕವಿ ನಾನು ಕಳೆದು ಹೋದ ಪದಗಳ ಜೋಡಿಸಿ

ನಿನ್ನ ಬಣ್ಣಿಸಲು ಕವಿತೆಯೊಂದ ಬರೆದೆ

ಮುಗಿಯದ ಕಾದಂಬರಿ ನೀನು ಕವಿತೆಯಲೇಕೆ ಕುಳಿತೆ❤️


❤️ಬೋರ್ಗರೆಯುವ ಮಳೆಯು ಇಳೆಗೆ ತಂಪು,

ಮಳೆಯಲ್ಲಿ ಅವಳ ಜೊತೆಗಿನ

ನಡಿಗೆ ಈ ಇನಿಯನಿಗೆ ತಂಪು..❤️


❤️ನೀನೇಕೆ ಅಳುವೆ, ನಾ ನಿನ್ನ ಜೊತೆಗಿರುವೆ..

ನೀ ಹೇಗೆ ಸಾಯುವೇ, ನಾ ನಿನ್ನ ಉಸಿರಾಗಿರುವೆ..❤️


Kannada Kavanagalu About Love


❤️ಕತ್ತಲೆಯಕಾರ್ಮೋಡ ಮುಸುಕಿರುವುದು

ಅಂಧಕಾರದ ಅಂಧತ್ವ ಆವರಿಸಿರುವುದು

ಸಂಗಾತಿ ಇಲ್ಲದ ಜೀವನ ಏಕಾಂಗಿಯಾಗಿರುವುದು..❤️


❤️ಹೇ ಚಿನ್ನ

ನಿನ್ನ ಪ್ರೀತಿಯ ಮೋಡಿಗೆ

ನಾ ಬಿದ್ದೆ ಬಲೆಗೆ

ಸಿಲುಕಿದ ಮೀನಿನ ಹಾಗೇ

ಸೋತು ಹೋಯ್ತು

ಚಲುವೇ ನನ್ನ ಮನಸ್ಸು

ನಿನ್ನ ಅಂದ ಕಂಡಾಗ❤️


❤️ಕಾಡುತ್ತಿದೆ ಎನಗೆ ನೀ ನನ್ನ ಕಂಡಾಗ

ಬರುವ ಆ ನಿನ್ನ ನಗೆ…

ಕೆರಳಿಸುತ್ತಿದೆ ನನ್ನ ಮನಸಿನೊಳಗೆ ಹೊಕ್ಕು ಪ್ರೀತಿಯ ಬುಗ್ಗೆ….

ಹೇಳು ಗೆಳತಿ ಆದಷ್ಟು ಬೇಗ

ನಿನ್ನ ಸನಿಹ ನನ್ನದಾಗುವುದೇ..?❤️


❤️ಅದೇನೋ ಹೊಸಭಾವ .

ಅದೇನೋ ಹೊಸ ಆಲೋಚನೆಗಳು . .

ಅದೇನೋ ಹೊಸಹರುಷ . .

ಅದೇನೋ ಹೊಸಆತುರ . .

ಅದೇನೋ ಹೊಸದೊಂದು ಬದಲಾವಣೆ . . .

ಅದೇನೋ ಹೊಸದೊಂದು ತಿಳಿಯದ ತಳಮಳಿಕೆ 

ಈ ಹೊಸತನಕ್ಕೆ ಮನಸ್ಸಿಟ್ಟ ಹೆಸರೇ ಪಿರೂತಿ . .

ಆದ್ರೆ ಅದನ್ನ ಒಪ್ಪಿಕೊಳ್ಳೋಕೆ ಅದೆಷ್ಟೋ

ಹದಿಹರಿಯದ ಹೃದಯಕ್ಕೆ ಭೀತಿ . . – Sujatha❤️


❤️ಇರುಳುಗಳ ನಡುವಲ್ಲಿ ಕನಸುಗಳ ತೆರೆಯಲ್ಲಿ

ನಿನ್ನ ಬಿಂಬಗಳು ಪ್ರಿಯೆ ಮತ್ತೆ ಮತ್ತೆ ನಡೆದಿವೆ,

ತತ್ತರಿಸಿ ಹೋಗಿರುವ ಪ್ರೇಮ ಬಳ್ಳಿಯ ಚೆಲುವೆ ಮತ್ತೆ ನಡುವೆಯೇ ನಿನ್ನ ಪ್ರೇಮಧಾರೆಯ ಹರಿಸಿ ….❤️


❤️ಶರಣಾದೆ ನನ್ನವಳಿಗೆ ಅವಳ ಮುದ್ದು ಮೊಗ ಕಂಡು,

ಶರಣಾದೆ ನನ್ನವಳಿಗೆ ಅವಳ ಮುದ್ದು ಮನವ ಕಂಡು,

ಶರಣಾದೆ ನನ್ನವಳಿಗೆ ಅವಳ ಸದ್ದಿಲ್ಲದ ಪ್ರೀತಿ ಕಂಡು,

ಶರಣಾದೆ ನನ್ನವಳಿಗೆ ಅವಳ ಪ್ರೇಮವ ಕಂಡು,

ಶರಣಾದೆ ನನ್ನವಳಿಗೆ ಅವಳ ಪ್ರೀತಿಯ ಕಂಡು,

ಶರಣಾದೆ ನನ್ನವಳಿಗೆ ಅವಳ ಅಗಾಧ ಮಾತು ಕಂಡು,

ಶರಣಾದೆ ನನ್ನವಳಿಗೆ ಅವಳ ಸ್ವಾರ್ಥತೆ ಕಂಡು,

ಶರಣಾದೆ ನನ್ನವಳಿಗೆ

ಅವಳ ಸೆರೆಯಾಗಿ ಹೋದೆ…❤️


❤️ಉಸಿರಲ್ಲಿ ಉಸಿರಾಗಿ ಬೆರೆತು

ನಿನ್ನ ಪ್ರೀತಿ ನನ್ನುಸಿರಾಯಿತು…❤️


❤️ಮನದ ವೀಣೆ ಮೀಟಿ ನೀನು ಸಂಗೀತವಾ ಆಲಿಸಿದೆ,

ಎದೆಯ ಕದವ ತಟ್ಟಿ ಬಡಿತವನಾಲಿಸಿದೆ❤️


❤️ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ,

ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ …

ಮರೆಯದೆ ತರುವೆ!

ಎಂದೂ ಬಾಡದ ಕವಿತೆಗಳೆಂಬ ಮಲ್ಲಿಗೆ..!!❤️


❤️ನಿನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ ಮನಸ್ಸಿಗೆ ಅದು ಇಷ್ಟ ಇಲ್ಲ . . .

ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ ಅಂತಲ್ಲ .

ಸಿಗೊ ಯಾರೋ ನೀನಾಗಿರಲ್ಲ . . .❤️
Send the love poems given in this post to your loved one and express your feelings We hope you liked this post please share this post with your friends, relatives

Tags
close button